ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೂದಲಳೆಯಲ್ಲಿ ಸೋಲು ತಪ್ಪಿಸಿಕೊಂಡಿತು. ಇದರೊಂದಿಗೆ ಸರಣಿ 2-2 ರಿಂದ ಸಮಬಲಗೊಂಡಿದೆ. ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ನಿನ್ನೆಯ ಪಂದ್ಯವನ್ನು ರೋಚಕವಾಗಿ 8 ರನ್ ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಸರಣಿ ಜೀವಂತವಾಗಿರಿಸಿದೆ. ಮತ್ತೆ ಟಾಸ್ ಸೋತ ವಿರಾಟ್ ಕೊಹ್ಲಿ ಪಡೆ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್