Widgets Magazine

ಭಾರತ-ಬಾಂಗ್ಲಾ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ

ರಾಜ್ ಕೋಟ್| Krishnaveni K| Last Modified ಗುರುವಾರ, 7 ನವೆಂಬರ್ 2019 (18:41 IST)
ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ.
 

ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಮಳೆಯ ಭೀತಿಯ ನಡುವೆ ಪಂದ್ಯ ನಡೆಯುತ್ತಿದೆ. ಸದ್ಯಕ್ಕೆ ಹವಾಮಾನ ತಿಳಿಯಾಗಿದ್ದು ಪಂದ್ಯ ನಡೆಯಲಿದೆ.
 
ಈ ಪಂದ್ಯಕ್ಕೆ ಉಭಯ ತಂಡಗಳೂ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಮೊದಲ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ.
ಇದರಲ್ಲಿ ಇನ್ನಷ್ಟು ಓದಿ :