ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.ಈ ಸರಣಿಯ ಎಲ್ಲಾ ಮೂರೂ ಪಂದ್ಯಗಳಲ್ಲಿ ಭಾರತ ಟಾಸ್ ಗೆದ್ದುಕೊಂಡಂತಾಗಿದೆ. ಕಳೆದ ಎರಡು ಬಾರಿ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಇಂದು ಬ್ಯಾಟಿಂಗ್ ಮಾಡುತ್ತಿದೆ.ಈಗಾಗಲೇ ಸರಣಿ ಭಾರತದ ಕೈವಶವಾಗಿರುವುದರಿಂದ ಕೆಎಲ್ ರಾಹುಲ್ ಪಡೆ ಈ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ. ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ