ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರನ್ನು ದ.ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಭಾರತದ ಗೆಲುವಿಗೆ ಕಾರಣರಾದವರು ಥ್ರೀ ಸ್ಟಾರ್ ಗಳು.ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾಗೆ ಆರಂಭದಲ್ಲಿಯೇ ಕಾಡಿದವರು ವೇಗಿ ಜಸ್ಪ್ರೀತ್ ಬುಮ್ರಾ. ಭುವನೇಶ್ವರ್ ಕುಮಾರ್ ಅಷ್ಟೇನೂ ಪ್ರಭಾವ ಬೀರದಿದ್ದರೂ ಇನ್ನೊಂದು ತುದಿಯಿಂದ ಅದ್ಭುತವಾಗಿ ಬಾಲ್ ಎಸೆದ ಬುಮ್ರಾ ಎದುರಾಳಿಗಳ ಎರಡು ಪ್ರಮುಖ ವಿಕೆಟ್ ಕಿತ್ತು ಉಸಿರೆತ್ತದಂತೆ ಮಾಡಿದರು.ನಂತರ ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ ದಾಳಿಗಿಳಿದ