ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಹಲವು ದಾಖಲೆಗಳು ಮುರಿದು ಬೀಳುವ ನಿರೀಕ್ಷೆಯಿದೆ.ಮೊದಲನೆಯದಾಗಿ ನಾಯಕರಾಗಿ ಕೊಹ್ಲಿಗೆ ಈ ಪಂದ್ಯದ ಮಹತ್ವದ ಮೈಲಿಗಲ್ಲು ಸಾಧಿಸಲಿರುವ ಪಂದ್ಯ. ಈ ಪಂದ್ಯವನ್ನು ಗೆದ್ದರೆ ಭಾರತದ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ದಾಖಲೆ ಕೊಹ್ಲಿ ಪಾಲಾಗಲಿದೆ.ಇನ್ನು, ಹಿರಿಯ ವೇಗಿ ಇಶಾಂತ್ ಶರ್ಮಾಗೆ ಕಪಿಲ್ ದೇವ್ ದಾಖಲೆಯನ್ನು ಮುರಿಯಲು ಇನ್ನೊಂದು ವಿಕೆಟ್ ಬೇಕಾಗಿದೆ.