ಮುಂಬೈ: ಹೊಸ ರಾಜ್ಯ ಉದಯವಾದ ಮೇಲೆ ಎಲ್ಲವೂ ಹೊಸದಾಗಿ ಆಗಬೇಕು. ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ರಾಜ್ಯವಾಗಿ ಉದಯವಾಗಿರುವ ತೆಲಂಗಾಣವೂ ಇದಕ್ಕೆ ಹೊರತಲ್ಲ. ಅಲ್ಲೀಗ ಹೊಸ ಕ್ರಿಕೆಟ್ ಸಂಸ್ಥೆ ತಲೆ ಎತ್ತಲಿದೆ.ಇದುವರೆಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲೇ ತೆಲಂಗಾಣ ರಾಜ್ಯವೂ ಬರುತ್ತಿತ್ತು. ಇನ್ನು ಮುಂದೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಎಂದು ಹೊಸದಾಗಿ ಕ್ರಿಕೆಟ್ ಮಂಡಳಿ ಸ್ಥಾಪಿಸಿ ರಾಜ್ಯದಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ತಂತ್ರ ತೆಲಂಗಾಣ ರಾಜ್ಯದ್ದು.ಇದಕ್ಕಾಗಿ ಭಾರತೀಯ ಕ್ರಿಕೆಟ್ ಸಂಸ್ಥೆಗೆ ತೆಲಂಗಾಣ ಕ್ರಿಕೆಟ್ ಸಂಸ್ಥೆಯನ್ನು