ಪರ್ತ್: ಟಿ20 ವಿಶ್ವಕಪ್ ಆಡಲಿರುವ ಭಾರತ ತಂಡಕ್ಕೆ ಮೂವರು ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ.ದ.ಆಫ್ರಿಕಾ ವಿರುದ್ಧದ ಸರಣಿಯ ಭಾಗವಾಗಿದ್ದ ಶ್ರಾದ್ಧೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಜೊತೆಗೆ ಮೊಹಮ್ಮದ್ ಶಮಿ ಟೀಂ ಇಂಡಿಯಾವನ್ನು ಕೂಡಿಕೊಂಡಿದ್ದಾರೆ.ಈ ಮೂವರು ಮೀಸಲು ಆಟಗಾರರಾಗಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಅನುಭವಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಅಧಿಕೃತವಾಗಿ ತಂಡದ ಭಾಗವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.-Edited by Rajesh Patil