ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರ ಸೆಮಿಫೈನಲ್ ಹಂತ ತಲುಪುವ ತಂಡಗಳ ಪಟ್ಟಿಯಲ್ಲಿ ಈಗ ಒಂದು ಸ್ಥಾನಕ್ಕೆ ಪೈಪೋಟಿಯಿದೆ.ಭಾರತ ಮೊದಲನೆಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ್ದರೆ, ದ.ಆಫ್ರಿಕಾ, ಆಸ್ಟ್ರೇಲಿಯಾ ಮತ್ತೆರಡು ತಂಡಗಳಾಗಿವೆ. ಆದರೆ ನಾಲ್ಕನೇ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಸ್ಥಾನಕ್ಕೆ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಪೈಪೋಟಿಯಿದೆ.ಈ ಪೈಕಿ ಕಿವೀಸ್ ಗೆ ಹೆಚ್ಚಿನ ಅವಕಾಶವಿದೆ. ಹೀಗಾಗಿ ಇಂದು ಲಂಕಾ ವಿರುದ್ಧ ಗೆದ್ದರೆ