ಆನ್ ಫೀಲ್ಡ್ ವರ್ತನೆಗೆ ಕ್ಷಮೆ ಯಾಚಿಸಿದ ಆಸೀಸ್ ನಾಯಕ ಟಿಮ್ ಪೇಯ್ನ್

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:27 IST)
ಸಿಡ್ನಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಗೆ ಅಶ್ಲೀಲ ಪದ ಬಳಸಿ ಸ್ಲೆಡ್ಜಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.
 > ಐದನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಟಿಮ್ ಪೇಯ್ನ್ ಸ್ಲೆಡ್ಜಿಂಗ್ ಮಾಡಿ ಕೆಣಕಿದ್ದರು. ಈ ವೇಳೆ ಅವರು ಬಳಸಿದ ಪದಗಳು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತಾವು ಹಾಗೆ ಮಾಡಬಾರದಿತ್ತು. ಅದೊಂದು ಮೂರ್ಖತನವಾಗಿತ್ತು ಎಂದು ಪೇಯ್ನ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :