ಮುಂಬೈ: ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆ ಮಾಡಲು ಈಗಾಗಲೇ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಹೊಸ ಕೋಚ್ ಯಾರಾಗಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.ಕೆಲವು ಮೂಲಗಳ ಪ್ರಕಾರ ರವಿಶಾಸ್ತ್ರಿಯೇ ಮತ್ತೆ ಕೋಚ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿಯ ಬೆಂಬಲವಿರುವುದರಿಂದ ಬಿಸಿಸಿಐ ಮತ್ತೆ ರವಿಶಾಸ್ತ್ರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿತ್ತು.ಆದರೆ ಈಗ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ನಾಯಕನ ಪಾತ್ರವಿರದು ಎಂಬ ಸ್ಪಷ್ಟನೆ ಬಂದ ಮೇಲೆ ಇನ್ನೊಬ್ಬರ ಹೆಸರು ಕೇಳಿಬರುತ್ತಿದೆ. ಅವರೇ ಟಾಮ್ ಮೂಡಿ.