ಕ್ರಿಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಬಳಿಕ ಟೆಸ್ಟ್ ಸರಣಿಯನ್ನೂ 0-2 ಅಂತರದಿಂದ ಸೋತ ಟೀಂ ಇಂಡಿಯಾಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ. ಸ್ವದೇಶದಲ್ಲಿ ಮಾತ್ರ ನೀವು ಹುಲಿ, ವಿದೇಶದಲ್ಲಿ ಇಲಿಗಳು ಎಂದು ವಿರಾಟ್ ಪಡೆಯನ್ನು ಟ್ವಿಟರಿಗರು ಜರೆದಿದ್ದಾರೆ. ಅಷ್ಟೇ ಅಲ್ಲ, ಇಂತಹ ಗುಣಮಟ್ಟದ ಎದುರಾಳಿಯ ಎದುರು ಆಡುವ ಬದಲು ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಆಯೋಜಿಸಿ, ಗೆದ್ದು ಬೀಗಲು ಲಾಯಕ್ಕು. ಮೂರೇ ದಿನದಲ್ಲಿ ಟೆಸ್ಟ್ ಸೋಲುವ ನೀವು