ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯಗಳು ಮ್ಯಾಚ್ ಫಿಕ್ಸಿಂಗ್ ಬುಕಿಗಳ ಪ್ರಿಯವಾದ ಪಂದ್ಯವಾಗಿರುತ್ತದೆ. ಇಂತಹದ್ದೊಂದು ಪಂದ್ಯವನ್ನು ಫಿಕ್ಸ್ ಮಾಡಲು ತನಗೆ ಭಾರೀ ಮೊತ್ತದ ಹಣದ ಅಮಿಷ ಒಡ್ಡಲಾಗಿತ್ತು ಎಂದು ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಹೇಳಿಕೊಂಡಿದ್ದಾರೆ.ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಎರಡು ಬಾಲ್ ಗಳನ್ನು ಆಡದೇ ಬಿಟ್ಟರೆ 200,000 ಡಾಲರ್ ಹಣ ನೀಡುವುದಾಗಿ ನನಗೆ ಅಮಿಷವೊಡ್ಡಿದ್ದರು ಎಂದು ಟಿವಿ ಸಂದರ್ಶನವೊಂದರಲ್ಲಿ ಉಮರ್ ಹೇಳಿಕೊಂಡಿದ್ದಾರೆ.ಉಮರ್ ಈ ಹೇಳಿಕೆ