Widgets Magazine

ಆರ್ ಸಿಬಿ ಮೇಲಿನ ಸಿಟ್ಟಿಗೆ ಡ್ರೆಸ್ಸಿಂಗ್ ರೂಂ ಬಾಗಿಲು ಒಡೆದಿದ್ದ ಅಂಪಾಯರ್ !

ಬೆಂಗಳೂರು| Krishnaveni K| Last Modified ಬುಧವಾರ, 8 ಮೇ 2019 (07:15 IST)
ಬೆಂಗಳೂರು: ಆರ್ ಸಿಬಿ ಈ ವರ್ಷದ ಐಪಿಎಲ್ ನ ಕೊನೆಯ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿತ್ತು.

 
ಈ ಪಂದ್ಯವನ್ನು ಆರ್ ಸಿಬಿ ಗೆದ್ದುಕೊಂಡರೂ ಪಂದ್ಯದಲ್ಲಿ ನೋ ಬಾಲ್ ವಿವಾದವೊಂದು ಸುದ್ದಿ ಮಾಡಿತ್ತು. ಉಮೇ‍ಶ್ ಯಾದವ್ ಎಸೆದ ಬಾಲ್ ಸರಿಯಾಗಿದ್ದರೂ ಅದನ್ನು ನೋ ಬಾಲ್ ಎಂದು ಘೋಷಿಸಿ ಅಂಪಾಯರ್ ನಿಗೆಲ್ ಲಾಂಗ್ ಪ್ರಮಾದವೆಸಗಿದ್ದರು. ಈ ಘಟನೆಗೆ ಆರ್ ಸಿಬಿ ಆಟಗಾರರು ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದರು.
 
ಆದರೆ ಹೈದರಾಬಾದ್ ಇನಿಂಗ್ಸ್ ಮುಗಿದ ಬಳಿಕ ಪೆವಲಿಯನ್ ಗೆ ತೆರಳಿದ ಅಂಪಾಯರ್ ನಿಗೆಲ್ ಡ್ರೆಸ್ಸಿಂಗ್ ರೂಂನ ಬಾಗಿಲಿಗೆ ಒದ್ದು ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ ಎನ್ನಲಾಗಿದ್ದು, ಈ ಘಟನೆಯಿಂದ ಕೊಠಡಿಯ ಬಾಗಿಲಿಗೆ ಹಾನಿಯಾಗಿದೆ. ಹೀಗಾಗಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ನಷ್ಟ ಪರಿಹಾರವಾಗಿ 5,000 ರೂ. ದಂಡ ನೀಡಲಾಗಿದೆ ಎಂಬ ವರದಿಗಳಾಗಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :