ಪೊಚೆಫ್ ಸ್ಟೂಮ್: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಬಾಂಗ್ಲಾ ಆಟಗಾರರ ಸಾಧನೆಯನ್ನೇನೋ ಎಲ್ಲರೂ ಕೊಂಡಾಡುತ್ತಿದ್ದಾರೆ. ಆದರೆ ವಿಶ್ವಕಪ್ ಗೆದ್ದ ಬಳಿಕ ಅವರ ವರ್ತನೆ ಇದೀಗ ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ವಿಶ್ವಕಪ್ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರು ಮೈದಾನಕ್ಕೆ ನುಗ್ಗಿ ಎಲ್ಲರಿಗೂ ಕೈಕುಲುಕಿ ವಿದಾಯ ಹೇಳುತ್ತಿದ್ದ ಭಾರತೀಯ ಆಟಗಾರರ ಮುಂದೆ ಬಂದು ಅಸಭ್ಯವಾಗಿ ಕುಣಿದು ಕುಹುಕ ಮಾಡಿದ್ದಾರೆ.