ಮುಂಬೈ: ನಟಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವಿನ ವಾಗ್ವಾದ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಂದರ್ಶನವೊಂದರಲ್ಲಿ ರಿಷಬ್ ಬಗ್ಗೆ ಪರೋಕ್ಷವಾಗಿ ಊರ್ವಶಿ ಹೇಳಿಕೆ ಕೊಟ್ಟ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ.ಸಂದರ್ಶನವೊಂದರಲ್ಲಿ ಊರ್ವಶಿ ರಿಷಬ್ ಹೆಸರನ್ನು ಪರೋಕ್ಷವಾಗಿ ಸೂಚಿಸಿ ದೆಹಲಿಯ ಹೋಟೆಲ್ ನಲ್ಲಿ ನನಗಾಗಿ ತುಂಬಾ ಹೊತ್ತು ಕಾದರು, ಅನೇಕ ಬಾರಿ ಕರೆ ಮಾಡಿದರು. ಆದರೆ ಶೂಟಿಂಗ್ ನಿಂದ ಸುಸ್ತಾಗಿದ್ದ ನಾನು ಮರಳಿ ಹೋಗುವಂತೆ ಹೇಳಿದೆ