ಮುಂಬೈ: ರನ್ ಬರಗಾಲ ಎದುರಿಸುತ್ತಿರುವ ವಿರಾಟ್ ಕೊಹ್ಲಿಯನ್ನು ಆಡುವ ಬಳಗದಿಂದ ಹೊರಗಿಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕ ಮೂಲದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಈ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ.ಈ ಹಿಂದೆ ಸೆಹ್ವಾಗ್, ಸೌರವ್ ಗಂಗೂಲಿ, ಜಹೀರ್ ಖಾನ್, ಹರ್ಭಜನ್ ಮುಂತಾದ ಘಟಾನುಘಟಿ ಆಟಗಾರರನ್ನೂ ಫಾರ್ಮ್ ಕೊರತೆ ಎದುರಿಸಿದ್ದಾಗ ತಂಡದಿಂದ ಕಿತ್ತು ಹಾಕಲಾಗಿತ್ತು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.‘ನೀವು ಕಳಪೆ ಫಾರ್ಮ್ ನಲ್ಲಿದ್ದಾಗ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ ತಂಡದಿಂದ