Widgets Magazine

ವಿಜಯ್ ಹಜಾರೆ ಟ್ರೋಫಿ ಫೈನಲ್: ಕರ್ನಾಟಕಕ್ಕೆ ಸಿಗುತ್ತಾ ಚಾಂಪಿಯನ್ ಪಟ್ಟ?

ಬೆಂಗಳೂರು| Krishnaveni K| Last Modified ಶುಕ್ರವಾರ, 25 ಅಕ್ಟೋಬರ್ 2019 (09:09 IST)
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿದ್ದು, ಇಂದು ತಮಿಳುನಾಡು ತಂಡವನ್ನು ಫೈನಲ್ ನಲ್ಲಿ ಎದುರಿಸಲಿದೆ.
 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇಂದು ಫೈನಲ್ ಪಂದ್ಯ ಗೆದ್ದರೆ ಕರ್ನಾಟಕ ನಾಲ್ಕನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡ ಸಾಧನೆ ಮಾಡಲಿದೆ.
 
ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಜತೆಗೆ ಕರ್ನಾಟಕದ ಬೌಲಿಂಗ್ ಕೂಡಾ ಬಲಿಷ್ಟವಾಗಿದೆ. ಇದರ ಜತೆಗೆ ತವರಿನ ಬಲವೂ ಇರುವುದರಿಂದ ಫೈನಲ್ ಗೆಲ್ಲುವ ಎಲ್ಲಾ ಅವಕಾಶವೂ ರಾಜ್ಯ ತಂಡಕ್ಕಿದೆ. ಇನ್ನು, ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಗೇಟ್ ನಂ.15 ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಅವಕಾಶ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :