ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ಅಲ್ಲಿನ ಕೌಂಟಿ ಕ್ರಿಕೆಟ್ ನಲ್ಲಿ ಆಡುವ ನಿರ್ಧಾರ ಮಾಡಿದ್ದರು. ಆದರೆ ಇದೀಗ ಆ ಕನಸು ಭಗ್ನವಾಗುವ ಸಾಧ್ಯತೆಯಿದೆ.ಕೌಂಟಿ ಕ್ರಿಕೆಟ್ ಆಡಬೇಕಾದರೆ ಇದೇ ಮೊದಲು ಭಾರತಕ್ಕೆ ಟೆಸ್ಟ್ ಸರಣಿ ಆಡಲು ಬರುತ್ತಿರುವ ಆಫ್ಘಾನಿಸ್ತಾನ ಸರಣಿಯಿಂದ ಕೊಹ್ಲಿ ಹೊರಗುಳಿಯಬೇಕಾಗುತ್ತದೆ. ಅದಕ್ಕೂ ಕೊಹ್ಲಿ ತಯಾರಾಗಿದ್ದರು.ಆದರೆ ಇದೀಗ ಬಿಸಿಸಿಐ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಬಿಟ್ಟು ಅಫ್ಘಾನಿಸ್ತಾನ ಸರಣಿಯಲ್ಲಿ ಆಡಲು ಸೂಚಿಸಿದೆ ಎನ್ನಲಾಗಿದೆ.