ಬೆಂಗಳೂರು: ಟೀಂ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ನಿಂದ ವಿರಾಮ ಪಡೆದು ಇದೀಗ ಐಪಿಎಲ್ ಗೆ ಸಜ್ಜಾಗುತ್ತಿರುವ ನಾಯಕ ವಿರಾಟ್ ಕೊಹ್ಲಿ ಬಿಡುವಿನ ದಿನಗಳಲ್ಲಿ ಕ್ರಿಕೆಟ್ ಕಿಟ್ ಕಡೆಗೆ ತಿರುಗಿಯೂ ನೋಡಿರಲಿಲ್ಲ ಎಂದಿದ್ದಾರೆ.ದ.ಆಫ್ರಿಕಾ ಪ್ರವಾಸದ ಕೊನೆ ಕೊನೆಯಲ್ಲಿ ನಾನು ತುಂಬಾ ಬಳಲಿದ್ದೆ. ನನಗೆ ವಿಶ್ರಾಂತಿ ಬೇಕು ಎಂದು ಅನಿಸಿತ್ತು. ಅದಕ್ಕೇ ಕ್ರಿಕೆಟ್ ನಿಂದ ದೂರವಿದ್ದೆ. ಈ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಕ್ರಿಕೆಟ್ ನಿಂದ ದೂರವಿದ್ದೆ. ಆದರೆ ಟಿವಿಯಲ್ಲಿ ಆಗಾಗ ಬರುವ ಕ್ರಿಕೆಟ್ ಸ್ಕೋರ್