ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಲಂಡನ್ ಗೆ ತೆರಳಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿಗೂ ಕೊರೋನಾ ಸೋಂಕು ತಗುಲಿತ್ತು ಎಂದು ಸುದ್ದಿ ಹರಡಿದೆ.ಈ ಪ್ರವಾಸಕ್ಕೆ ಮೊದಲು ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಮಾಲ್ಡೀವ್ಸ್ ಗೆ ರಜೆ ಕಳೆಯಲು ತೆರಳಿದ್ದರು. ಅದಾದ ತಕ್ಷಣವೇ ಅವರು ಲಂಡನ್ ಗೆ ತೆರಳಿದ್ದರು.ಲಂಡನ್ ಗೆ ಬಂದಿಳಿದಾಗ ಅವರಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ವರದಿಯಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತ ಪ್ರಕಟಣೆ ಬಂದಿಲ್ಲ.