ಲಂಡನ್: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನ ವಿಶೇಷ ಪ್ರೋಗ್ರಾಂನಡಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್ ನಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ಆಡಿ ಖುಷಿಪಡಿಸಿದ್ದಾರೆ.ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಸದಸ್ಯರು ಲಂಡನ್ ನ ಶಾಲೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿದ್ದಾರೆ. ಅವರ ಜತೆಗೆ ಸೆಲ್ಫೀ, ಆಟ, ಫೋಟೋ ಎಂದು ಮಸ್ತ್ ಮಜಾ ಮಾಡಿದ್ದಾರೆ.ಅದರಲ್ಲೂ ಕೊಹ್ಲಿಯಂತೂ ಪ್ರತಿಯೊಬ್ಬ ಮಗುವಿಗೂ ಹಸ್ತಾಕ್ಷರ ನೀಡಿ ಖುಷಿಪಡಿಸಿದ್ದಾರೆ. ಅಲ್ಲದೆ ಆ ಮಕ್ಕಳ ಆಸಕ್ತಿಯೇನು