ಕಟಕ್ ಗೆ ಬಂದಿಳಿದ ಟೀಂ ಇಂಡಿಯಾ: ಕೊಹ್ಲಿ ಬಳಗಕ್ಕೆ ಫುಲ್ ರೆಸ್ಟ್!

ಕಟಕ್| Krishnaveni K| Last Modified ಶನಿವಾರ, 21 ಡಿಸೆಂಬರ್ 2019 (09:54 IST)
ಕಟಕ್: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯವಾಡಲು ಟೀಂ ಇಂಡಿಯಾ ಈಗಾಗಲೇ ಕಟಕ್ ಗೆ ಬಂದಿಳಿದಿದೆ. ಸಾಂಪ್ರದಾಯಿಕವಾಗಿ ಕ್ರಿಕೆಟಿಗರನ್ನು ಸ್ವಾಗತಿಸಲಾಗಿದೆ.

 
ಆದರೆ ಬಂದ ದಿನವೇ ಅಭ್ಯಾಸ ನಡೆಸದೇ ಕ್ರಿಕೆಟಿಗರು ಕೊಂಚ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ತಮ್ಮ ಹುಡುಗರ ಜತೆ ವಿರಾಟ್ ಕೊಹ್ಲಿ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 
ಇಂದು ಭಾರತ ಅಭ್ಯಾಸಕ್ಕಿಳಿಯುವ ನಿರೀಕ್ಷೆಯಿದೆ. ನಾಳೆ ಅಂತಿಮ ಮತ್ತು ನಿರ್ಣಾಯಕ ಪಂದ್ಯ ನಡೆಯಲಿದ್ದು, ನಾಳೆಯ ಪಂದ್ಯ ಗೆದ್ದವರಿಗೆ ಸರಣಿ ಗೆಲುವು ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :