ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ವಿಂಡೀಸ್ ಕಳಪೆ ಬ್ಯಾಟಿಂಗ್ ಮಾಡಿ ಪಂದ್ಯವನ್ನು ನೀರಸಗೊಳಿಸಿತ್ತು.ಇದರಿಂದಾಗಿ ಮೈದಾನದಲ್ಲಿದ್ದ ಪ್ರೇಕ್ಷಕರು ಅಕ್ಷರಶಃ ನಿದ್ರೆಯ ಮೂಡ್ ಗೆ ಜಾರಿದ್ದರು. ಮೂರನೇ ದಿನದಾಟದ ಸುಡು ಮಧ್ಯಾಹ್ನದ ವೇಳೆ ಪ್ರೇಕ್ಷಕರು ಈ ರೀತಿ ಆಸಕ್ತಿಯಲ್ಲದೇ ಕುಳಿತಿದ್ದು ನಾಯಕ ವಿರಾಟ್ ಕೊಹ್ಲಿಗೆ ಇಷ್ಟವಾಗಲಿಲ್ಲ.ಹೀಗಾಗಿ ಅವರು ಚಪ್ಪಾಳೆ ತಟ್ಟಿ ಪ್ರೇಕ್ಷಕರ ಕಡೆಗೆ ಹೆಚ್ಚು ಸದ್ದು ಮಾಡುವಂತೆ ಸನ್ನೆ ಮಾಡಿದರು. ಜೋರಾಗಿ ಕೂಗುವಂತೆ ಅವರು