ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರೂ ಇನಿಂಗ್ಸ್ ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಈಗ ಹಿಂದೆಂದೂ ಕಾಣದ ಕುಖ್ಯಾತಿಗೊಳಗಾಗಿದ್ದಾರೆ.ಒಟ್ಟು ಮೂರು ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 26 ರನ್. ಅವರು ಈ ರೀತಿ ದಯನೀಯ ವೈಫಲ್ಯ ಅನುಭವಿಸಿದ್ದು ಏಳು ವರ್ಷಗಳ ಹಿಂದೆ. ಅಂದರೆ 2015 ರ ಬಳಿಕ ಇದೇ ಮೊದಲ ಬಾರಿಗೆ ಕೊಹ್ಲಿ ಈ ಮಟ್ಟಿಗೆ ಒಂದು ಸರಣಿಯಲ್ಲಿ ವೈಫಲ್ಯ ಅನುಭವಿಸಿರುವುದು.