ಮೆಲ್ಬೋರ್ನ್: ಟೀಂ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿರಾಟ್ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ. ಕೊಹ್ಲಿ ಹುಟ್ಟುಹಬ್ಬಕ್ಕೆ ಕ್ರಿಕೆಟಿಗರು, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.ಕೊಹ್ಲಿ ಇಂದು 34 ವರ್ಷ ಪೂರ್ತಿ ಮಾಡುತ್ತಿದ್ದಾರೆ. 2008 ರಲ್ಲಿ ಟೀಂ ಇಂಡಿಯಾಕ್ಕೆ ಕಾಲಿಟ್ಟ ಕೊಹ್ಲಿ ಇಂದಿಗೆ ಅನೇಕ ದಾಖಲೆಗಳನ್ನು ನಿರ್ಮಿಸಿ ರನ್ ಶಿಖರವನ್ನೇ ನಿರ್ಮಿಸಿದ್ದಾರೆ. ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟಿಗರಾಗಿರುವ ಕೊಹ್ಲಿ ಈಗ ಅದ್ಭುತ ಫಾರ್ಮ್ ನಲ್ಲಿದ್ದಾರೆ.ಇನ್ನು, ಕೊಹ್ಲಿಗೆ ಟೀಂ ಇಂಡಿಯಾ