ನವದೆಹಲಿ: ಅತ್ತ ಮೈದಾನದಲ್ಲಿ ದಾಖಲೆ ಮಾಡುವ ವಿರಾಟ್ ಕೊಹ್ಲಿ ಈಗ ಸೋಷಿಯಲ್ ಮೀಡಿಯಾದಲ್ಲೂ ಹೊಸ ದಾಖಲೆ ಮಾಡಿದ್ದಾರೆ. ಇನ್ ಸ್ಟಾಗ್ರಾಂ ಪುಟದಲ್ಲಿ ಸಕ್ರಿಯರಾಗಿರುವ ಕೊಹ್ಲಿ, 150 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಾಡಿದ್ದಾರೆ. ಕೊಹ್ಲಿ ಕೇವಲ ಫಾಲೋವರ್ ಗಳ ವಿಚಾರ ಮಾತ್ರವಲ್ಲ. ಗಳಿಕೆಯಲ್ಲೂ ಏಷ್ಯಾ ಸೆಲೆಬ್ರಿಟಿಗಳ ಪೈಕಿ ಮುಂದಿದ್ದಾರೆ.ಜಾಗತಿಕವಾಗಿಯೂ 150 ಮಿಲಿಯನ್ ಫಾಲೋವರ್ ಗಳನ್ನು ದಾಟಿದ ವಿಶ್ವದ ನಾಲ್ಕನೇ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೊಹ್ಲಿಯದ್ದಾಗಿದೆ.