ಮೆಲ್ಬೋರ್ನ್: ವಿರಾಟ್ ಕೊಹ್ಲಿಯ ವರ್ತನೆ ಬಗ್ಗೆ ಮತ್ತೊಂದು ಅಪವಾದ ಕೇಳಿಬಂದಿದ್ದು, ಈ ಬಾರಿ ನಾಯಕ ಕೊಹ್ಲಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ.ಅದಕ್ಕೆ ಕಾರಣ ಅವರು ದ್ವಿತೀಯ ಟೆಸ್ಟ್ ಸೋತ ಬಳಿಕ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಜತೆಗೆ ನಡೆದುಕೊಂಡ ರೀತಿ. ಕೊಹ್ಲಿ ಪೇಯ್ನ್ ಕೈ ಕುಲುಕಲು ಬಂದಾಗ ಅವರನ್ನು ಅವಗಣಿಸಿ ಅವಮಾನ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಫೋಟೋ ನೋಡಿದ ಬಳಿಕ ಇದೀಗ ಕೊಹ್ಲಿ ವರ್ತನೆಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.