ನಮಗೆ ರವಿಶಾಸ್ತ್ರಿ ಇಷ್ಟ, ಆಮೇಲೆ ನಿಮ್ಮಿಷ್ಟ ಎಂದ ನಾಯಕ ವಿರಾಟ್ ಕೊಹ್ಲಿ

ಮುಂಬೈ, ಮಂಗಳವಾರ, 30 ಜುಲೈ 2019 (09:47 IST)

ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಹಾಲಿ ಕೋಚ್ ರವಿಶಾಸ್ತ್ರಿಯನ್ನೇ ನೇರವಾಗಿ ಬೆಂಬಲಿಸಿದ್ದಾರೆ.


 
ವೆಸ್ಟ್ ಇಂಡೀಸ್ ಸರಣಿಗೆ ವಿಮಾನವೇರುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ರವಿಶಾಸ್ತ್ರಿಯನ್ನು ನೇರವಾಗಿ ಕೊಹ್ಲಿ ಬೆಂಬಲಿಸಿದ್ದಾರೆ. ನಮಗೆಲ್ಲರಿಗೂ ರವಿಶಾಸ್ತ್ರಿಯವರೊಂದಿಗೆ ಉತ್ತಮ ಬಾಂಧವ್ಯವಿದೆ. ಅವರೇ ತರಬೇತುದಾರನಾಗಿ ಮುಂದುವರಿದರೆ ಸಂತೋಷಪಡುತ್ತೇವೆ ಎಂದು ನೇರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಕೋಚ್ ಹುದ್ದೆಗೆ ಈಗಾಗಲೇ ಗ್ಯಾರಿ ಕರ್ಸ್ಟನ್, ಮಹೇಲಾ ಜಯವರ್ಧನೆ ಮುಂತಾದವರು ಅರ್ಜಿ ಸಲ್ಲಿಸಿದ್ದಾರೆ. ಕಪಿಲ್ ದೇವ್ ನೇತೃತ್ವದ ಸಮಿತಿ ಕೋಚ್ ಆಯ್ಕೆ ಮಾಡುವಾಗ ಈ ಬಾರಿ ನಾಯಕನ ಅಭಿಪ್ರಾಯ ಕೇಳುವುದಿಲ್ಲ ಎಂಬ ಮಾತುಗಳಿತ್ತು. ಆದರೆ ನಾಯಕನೇ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿರುವಾಗ ಅದು ಕೋಚ್ ಆಯ್ಕೆ ಪ್ರಕ್ರಿಯೆ ಮೇಲೆ ಬಹಳ ಪ್ರಭಾವ ಬೀರಬಹುದು. ತಂಡದ ಹಿತದೃಷ್ಟಿಯಿಂದ ರವಿಶಾಸ್ತ್ರಿಯನ್ನೇ ಮುಂದುವರಿಸುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾ ಜತೆಗಿನ ರಗಳೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಮುಂಬೈ: ಟೀಂ ಇಂಡಿಯಾದಲ್ಲಿ ಉಪನಾಯಕ ರೋಹಿತ್ ಶರ್ಮಾ ಜತೆಗೆ ತಮ್ಮ ಸಂಬಂಧ ಹಳಸಿದೆ ಎಂಬ ವದಂತಿಗಳ ಬಗ್ಗೆ ನಾಯಕ ...

news

ವಿರಾಟ್ ಕೊಹ್ಲಿ ಬಿಸಿಸಿಐಯನ್ನೇ ಆಳುವಷ್ಟು ಪವರ್ ಫುಲ್?!

ಮುಂಬೈ: ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲೇ ಸೋತರೂ ಇನ್ನೂ ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿಯನ್ನೇ ...

news

ಕೊನೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ

ಮುಂಬೈ: ಇಂದು ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಕೆರೆಬಿಯನ್‍ ರಾಷ್ಟ್ರಕ್ಕೆ ...

news

ವಿರಾಟ್ ಕೊಹ್ಲಿ-ರೋಹಿತ್ ನಡುವೆ ಸಂಧಾವೇರ್ಪಡಿಸಲು ಬಿಸಿಸಿಐ ಯತ್ನ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಉಂಟಾಗಿದೆ ಎನ್ನಲಾಗಿರುವ ...