ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಗೆ ಬಂದಾಗಿನಿಂದ ನಾಯಕ ವಿರಾಟ್ ಕೊಹ್ಲಿಯಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಬಂದಿಲ್ಲ. ಆದರೆ ತಾವು ರನ್ ಗಳಿಸಿಲ್ಲದೇ ಇರುವುದನ್ನು ಒಪ್ಪಿಕೊಳ್ಳಲು ಕೊಹ್ಲಿ ಮಾತ್ರ ಸಿದ್ಧರಿಲ್ಲ.ಏಕದಿನ ಮತ್ತು ಟೆಸ್ಟ್ ಸೋಲಿಗೆ ಕೊಹ್ಲಿ ಕಳಪೆ ಫಾರ್ಮ್ ಕೂಡಾ ಮುಖ್ಯ ಕಾರಣವಾಗಿದೆ. ರೋಹಿತ್ ಶರ್ಮಾ, ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕೊಹ್ಲಿಯೇ ಭಾರತದ ಬ್ಯಾಟಿಂಗ್ ಗೆ ಅದರಲ್ಲೂ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಬೇಕಿತ್ತು. ಆದರೆ ಕೊಹ್ಲಿ ಬೇಗನೇ ಔಟಾಗುತ್ತಿರುವುದರಿಂದ ಯುವ ಆಟಗಾರರ ಮೇಲೆ ಹೆಚ್ಚಿನ ಹೊಣೆ