ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಕೇಳಿಬರುತ್ತಿರುವ ಟೀಕೆಗೆ ನಾಯಕ ವಿರಾಟ್ ಕೊಹ್ಲಿ ಸ್ಪಂದಿಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಂತೂ ಕೊಹ್ಲಿ ಪಡೆ ಸಾಕಷ್ಟು ಟ್ರೋಲ್ ಗೊಳಗಾಗುತ್ತಿದೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಕೊಹ್ಲಿ ಭಾವನಾತ್ಮಕ ಸಂದೇಶ ನೀಡಿದ್ದಾರೆ.ಫೇಸ್ ಬುಕ್ ನಲ್ಲಿ ಕೊಹ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ. ಸೋಲುತ್ತೇವೆ. ಆದರೆ ನೀವು ಇನ್ನು, ಮುಂದೆ ಎಂದೂ ನಮ್ಮ ಕೈ ಬಿಡಬೇಡಿ. ನಿಮ್ಮ ಬೆಂಬಲ ಸದಾ ನಮ್ಮೊಂದಿಗಿರಲಿ