ಮುಂಬೈ: ರನ್ ಮೆಷಿನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡದೇ ಎರಡು ವರ್ಷಗಳಾಗಿವೆ. ಕೊಹ್ಲಿಯಿಂದ ಈ ಎರಡು ವರ್ಷಗಳಲ್ಲಿ ಒಂದೇ ಒಂದು ಶತಕ ದಾಖಲಾಗಿಲ್ಲ.ಕಳೆದ ವರ್ಷ ಲಾಕ್ ಡೌನ್, ಕೊರೋನಾ ಭರಾಟೆಯಲ್ಲಿ ಕ್ರಿಕೆಟ್ ನಡೆದಿದ್ದೇ ಕಡಿಮೆ. ಹಾಗಿದ್ದರೂ ಸಿಕ್ಕ ಅವಕಾಶದಲ್ಲೂ ಕೊಹ್ಲಿ ರನ್ ಗಳಿಸಿರಲಿಲ್ಲ. ಈ ವರ್ಷವಾದರೂ ಅವರ ಶತಕದ ಬರ ನೀಗಬಹುದು ಎಂಬುದು ಅಭಿಮಾನಿಗಳ ಭರವಸೆಯಾಗಿತ್ತು. ಅದೂ ಈಗ ಸುಳ್ಳಾಗಿದೆ.ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್