ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕ ವಿರಾಟ್ ಕೊಹ್ಲಿಯ ಮೆಚ್ಚಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ಕಮಾಲ್ ಮಾಡಿದ್ದರು.ಅಷ್ಟಕ್ಕೂ ಕೊಹ್ಲಿ ತಾನು ಹೆಚ್ಚು ಯಶಸ್ಸು ಗಳಿಸಿರುವ ಮೂರನೇ ಕ್ರಮಾಂಕವನ್ನು ಯಾಕೆ ರಾಹುಲ್ ಗೆ ಬಿಟ್ಟುಕೊಟ್ಟರು ಎನ್ನುವುದಕ್ಕೆ ಪಂದ್ಯದ ನಂತರ ಅವರೇ ಸ್ಪಷ್ಟನೆ ನೀಡಿದ್ದಾರೆ.ವಿಶ್ವಕಪ್ ದೃಷ್ಟಿಯಿಂದ ನಾವು ಪ್ರಯೋಗ ಮಾಡಲೇಬೇಕಾಗಿತ್ತು. ರಾಹುಲ್ ಅತ್ಯುತ್ತಮ ತಾಂತ್ರಿಕ ಕೌಶಲ್ಯವಿರುವ ಬ್ಯಾಟ್ಸ್ ಮನ್. ಅವರು ಇಂತಹದ್ದೊಂದು ಅವಕಾಶಕ್ಕಾಗಿ ಅದೆಷ್ಟೋ