ಸೆಂಚೂರಿಯನ್: ದ.ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದುವರೆಗೆ ಇಂತಹ ತಂಡ ಭಾರತೀಯ ಕ್ರಿಕೆಟ್ ನಲ್ಲಿ ಇರಲಿಲ್ಲ. ಈ ತಂಡದಲ್ಲಿರುವವರೆಲ್ಲರೂ ಗೆಲುವಿಗಾಗಿಯೇ ಆಡೋದು ಎಂದು ಜಂಬದಿಂದಲೇ ಹೇಳಿಕೊಂಡಿದ್ದರು. ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ತವರಿನಲ್ಲಿ ಅನುಭವಿಸಿದ ಯಶಸ್ಸಿನ ಅಲೆಯಲ್ಲಿ ದ.ಆಫ್ರಿಕಾ ವಿಮಾನವೇರಿದ್ದ ಟೀಂ ಇಂಡಿಯಾಗೆ ಸೋಲಿನ ಸ್ವಾಗತ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಸೋತಾಗ ಅಭಿಮಾನಿಗಳೂ ಟೀಂ ಇಂಡಿಯಾವನ್ನು ಸಮರ್ಥಿಸಿಕೊಂಡಿದ್ದರು.