ಜಸ್ಪ್ರೀತ್ ಬುಮ್ರಾರನ್ನು ಎದುರಿಸುವ ಬ್ಯಾಟ್ಸ್ ಮನ್ ನೋಡಿದ್ರೆ ಅಯ್ಯೋ ಪಾಪ ಎನಿಸುತ್ತಂತೆ ವಿರಾಟ್ ಕೊಹ್ಲಿಗೆ!

ಜಮೈಕಾ, ಮಂಗಳವಾರ, 3 ಸೆಪ್ಟಂಬರ್ 2019 (09:54 IST)

ಜಮೈಕಾ: ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳಿಗೆ ಅಕ್ಷರಶಃ ಸಿಂಹ ಸ್ವಪ್ನರಾದ ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪಂದ್ಯದ ನಂತರ ಹೊಗಳಿಕೆಯ ಸುರಿಮಳೆಯನ್ನೇ ಮಾಡಿದ್ದಾರೆ.


 
ವಿಂಡೀಸ್ ವಿರುದ್ಧ  ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಯಾವುದೇ ಎದುರಾಳಿ ವಿರುದ್ಧ ಆಡುತ್ತಿದ್ದರೂ ಪ್ರಮುಖ ಅಸ್ತ್ರವಾಗುವ ಬುಮ್ರಾ ಬೆಂಕಿ ಚೆಂಡಿನಂತಹ ಎಸೆತದ ಬಗ್ಗೆ ಕೊಹ್ಲಿ ಹೊಗಳಿದ್ದಾರೆ.
 
‘ಬುಮ್ರಾಗೆ ಸ್ವಲ್ಪ ಕಾಲು ನೋವಿತ್ತು. ಹಾಗಿದ್ದರೂ ದ್ವಿತೀಯ ಇನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿ ತಮ್ಮ ಕೆಲಸ ಮುಗಿಸಿಕೊಟ್ಟರು. ಅವರಂತಹ ವೇಗಿ ನಮ್ಮ ತಂಡದಲ್ಲಿರುವುದು ನಮ್ಮ ಅದೃಷ್ಟ. ಒಬ್ಬ ಬ್ಯಾಟ್ಸ್ ಮನ್ ಆಗಿ ಆತನ ಸ್ವಿಂಗ್, ಚಲನೆಯನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ಎಷ್ಟು ಕಷ್ಟವೆಂದು ನನಗೆ ಗೊತ್ತು. ಸದ್ಯಕ್ಕೆ ಆತ ವಿಶ್ವದ ಪರಿಪೂರ್ಣ ಬೌಲರ್. ಆತನನ್ನು ಎದುರಿಸುವ ಬ್ಯಾಟ್ಸ್ ಮನ್ ಬಗ್ಗೆ ನನಗೆ ಅನುಕಂಪವೆನಿಸುತ್ತದೆ’ ಎಂದು ಕೊಹ್ಲಿ ಪ್ರಶಂಸಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಹಾಯಕ ಸಿಬ್ಬಂದಿಗಳ ಆಯ್ಕೆ ವಿಚಾರದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ನಡುವೆ ಭಿನ್ನಾಭಿಪ್ರಾಯ

ಮುಂಬೈ: ಟೀಂ ಇಂಡಿಯಾಗೆ ಮತ್ತೊಮ್ಮೆ ಕೋಚ್ ಆಗಿ ರವಿಶಾಸ್ತ್ರಿಯೇ ಪುನರಾಯ್ಕೆಯಾದ ಬಳಿಕ ಇದೀಗ ಸಹಾಯಕ ...

news

ನಾಯಕನಾಗಿ ವಿರಾಟ್ ಕೊಹ್ಲಿ ಈಗ ಟೀಂ ಇಂಡಿಯಾ ನಾಯಕರಿಗೇ ನಂ.1

ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ...

news

ಡೆಲ್ಲಿ ಪರ ದೇಶೀಯ ಕ್ರಿಕೆಟ್ ಆಡ್ತಾರಾ ವಿರಾಟ್ ಕೊಹ್ಲಿ?

ನವದೆಹಲಿ: ಟೀಂ ಇಂಡಿಯಾ ನಾಯಕರಾದ ಮೇಲೆ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ ಇದೀಗ ತಮ್ಮ ತವರು ದೆಹಲಿಯ ವಿಜಯ್ ...

news

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್

ಕೋಲ್ಕೊತ್ತಾ: ಟೀಂ ಇಂಡಿಯಾ ಪ್ರಮುಖ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕೊತ್ತಾದ ನ್ಯಾಯಾಲಯ ಬಂಧನ ...