ಲಂಡನ್: ಟೀಂ ಇಂಡಿಯಾಗೆ ಅಧಿಕೃತ ಅಭಿಮಾನಿಗಳ ಗುಂಪು ಭಾರತ್ ಆರ್ಮಿ ಇರುವಂತೇ ಇಂಗ್ಲೆಂಡ್ ತಂಡಕ್ಕೂ ಬಾರ್ಮಿ ಆರ್ಮಿ ಎಂಬ ಅಭಿಮಾನಿಗಳ ಗುಂಪು ಇದೆ. ಈ ಅಭಿಮಾನಿಗಳ ಸಂಘ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 2017-18 ನೇ ಸಾಲಿನ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದೆ.ಈ ವಿಚಾರವನ್ನು ಸ್ವತಃ ಬಿಸಿಸಿಐ ತನ್ನ ಟ್ವಿಟರ್ ಪೇಜ್