ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಆಗಲಿರುವ ವಿರಾಟ್ ಕೊಹ್ಲಿ

ಮುಂಬೈ, ಮಂಗಳವಾರ, 15 ಅಕ್ಟೋಬರ್ 2019 (09:06 IST)

ಮುಂಬೈ: ಆಶಸ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ನಂ.1 ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರ ಸ್ಥಾನ ಅಲಂಕರಿಸಿದ್ದರು.


 
ಆದರೆ ಈಗ ಮತ್ತೆ ಕೊಹ್ಲಿ ತಾವು ಕಳೆದುಕೊಂಡಿರುವ ಪಟ್ಟ ಮರಳಿ ಪಡೆಯುವ ಅವಕಾಶ ಪಡೆದಿದ್ದಾರೆ. ದ.ಆಫ್ರಿಕಾ ವಿರುದ್ಧ ಅಜೇಯ ದ್ವಿಶತಕ ಸಿಡಿಸಿದ ಕೊಹ್ಲಿ ಈಗ ಐಸಿಸಿ ರ್ಯಾಂಕಿಂಗ್ ನಲ್ಲಿ 936 ಅಂಕ ಪಡೆದಿದ್ದಾರೆ. ಇದರೊಂದಿಗೆ ನಂ.1 ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ (937 ಅಂಕ) ರಿಂದ ಕೇವಲ ಒಂದು ಅಂಕ ದೂರ ಇದ್ದಾರೆ.
 
ಇದೀಗ ರಾಂಚಿಯಲ್ಲಿ ಅಕ್ಟೋಬರ್ 19 ರಿಂದ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ನಿಂದ ಸಿಡಿದರೆ ಮತ್ತೆ ನಂ.1 ಆಗಲಿದ್ದಾರೆ. ಇದರ ಜತೆಗೆ ಇದೀಗ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 10 ರೊಳಗೆ ಕಾಲಿಟ್ಟಿದ್ದಾರೆ. ಇನ್ನೊಂದೆಡೆ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಮಯಾಂಕ್ ಅಗರ್ವಾಲ್ ಮತ್ತಷ್ಟು ಏರಿಕೆ ಕಂಡಿದ್ದು ನಂ.17 ಕ್ಕೆ ತಲುಪಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವೃದ್ಧಿಮಾನ್ ಸಹಾ ಕ್ಯಾಚ್ ಗೆ ರಿಷಬ್ ಪಂತ್ ಟೀಂ ಇಂಡಿಯಾದಿಂದಲೇ ಔಟ್!

ಪುಣೆ: ಫಾರ್ಮ್ ಕೊರತೆಯಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಅವಕಾಶ ...

news

ರವಿಶಾಸ್ತ್ರಿ ಫೋಟೋವನ್ನು ಐಸಿಸಿ ಹೀಗೆ ಪ್ರಕಟಿಸಿದ್ದೇ ತಪ್ಪಾಯ್ತು!

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದರೆ ಟ್ವಿಟರಿಗರು ಆಗಾಗ ಕಾಲೆಳೆಯುವುದು ಜಾಸ್ತಿ. ಆದರೆ ನಗುವವರ ...

news

ಬಿಸಿಸಿಐ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಅಕ್ಟೋಬರ್ 23 ರಂದು ಚುನಾವಣೆ ನಡೆದು ಹೊಸ ಅಧ್ಯಕ್ಷರ ನೇಮಕವಾಗಲಿದೆ. ...

news

ವಿರಾಟ್ ಕೊಹ್ಲಿಯನ್ನು ಕೊನೆಗೂ ಒಪ್ಪಿಕೊಂಡ ಗೌತಮ್ ಗಂಭೀರ್

ನವದೆಹಲಿ: ಗೌತಮ್ ಗಂಭೀರ್ ಇದುವರೆಗೂ ವಿರಾಟ್ ಕೊಹ್ಲಿಯ ನಾಯಕತ್ವ ಚೆನ್ನಾಗಿದೆ ಎಂದು ಒಪ್ಪಿಕೊಳ್ಳುತ್ತಲೇ ...