ಮುಂಬೈ: ನಾಯಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಈಗ ಭಾರೀ ಸವಾಲು ಎದುರಾಗಿದೆ.ಮೊದಲೇ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಕೊಹ್ಲಿಗೆ ಈ ಸರಣಿಯಲ್ಲಿ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಕ್ಲಿಕ್ ಆಗಲೇಬೇಕಾದ ಅನಿವಾರ್ಯತೆಯಿದೆ.ಒಂದು ವೇಳೆ ಕೊಹ್ಲಿ ಯಾವುದಾದರೂ ಒಂದರಲ್ಲಿ ಸೋತರೂ ಈ ಸರಣಿ ಮುಗಿದ ಮೇಲೆ ಅವರು ಅದಕ್ಕೆ ತಕ್ಕ ಬೆಲೆ ತೆರಬೇಕಾದ ಪರಿಸ್ಥಿತಿ ಇರಬಹುದು. ಈಗಾಗಲೇ ಬಿಸಿಸಿಐ ವಿರುದ್ಧ ಬಹಿರಂಗವಾಗಿ ಅಸಮಾಧಾನ