ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡದ ಮೇಲೆ ವಿಶೇಷ ಪ್ರೇಮ ಇರಿಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೊಹ್ಲಿ ತಮ್ಮ ಗಡ್ಡಕ್ಕೆ ಇನ್ಶೂರ್ ಮಾಡಿಸಿದ್ದಾರಾ?ಹೀಗೊಂದು ಅನುಮಾನವನ್ನು ಕೆಎಲ್ ರಾಹುಲ್ ಟ್ವಟರ್ ಮೂಲಕ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇಬ್ಬರು ಸೂಟುಧಾರಿಗಳು ಕೊಹ್ಲಿ ಗಡ್ಡವನ್ನು ಅಳೆಯುತ್ತಿರುವ ಸಿಸಿಟಿವಿ ವಿಡಿಯೋವನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.ಅಷ್ಟೇ ಅಲ್ಲದೆ, ನಿಮಗೆ ಗಡ್ಡದ ಮೇಲೆ ವಿಶೇಷ ಪ್ರೇಮವಿದೆ ಎನ್ನುವುದು ಗೊತ್ತು. ಆದರೆ ಈ ವಿಡಿಯೋ