ಮುಂಬೈ: ಈ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲಲಾಗದಿದ್ದರೂ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದಿದ್ದು ಪ್ಲಸ್ ಪಾಯಿಂಟ್ ಆಯಿತು.ಸತತ ಮೂರು ವರ್ಷಗಳಿಂದ ರನ್ ಬರಗಾಲ ಎದುರಿಸುತ್ತಿದ್ದ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಗಳಿಸಿ ಮೂರು ವರ್ಷಗಳ ವನವಾಸ ಅಂತ್ಯಗೊಳಿಸಿದ್ದರು. ಈ ಯಶಸ್ಸಿಗೆ ತಮ್ಮ ಪರಿಶ್ರಮವೇನಿತ್ತು ಎಂಬುದನ್ನು ಕೊಹ್ಲಿ ಹೇಳಿಕೊಂಡಿದ್ದಾರೆ.‘ಈ ಏಷ್ಯಾ ಕಪ್ ನಲ್ಲಿ ನಾನು ನನ್ನಲ್ಲಿ ಸಕಾರಾತ್ಮಕತೆ ನೋಡಿದೆ. ನನ್ನ ಕಷ್ಟದ ದಿನಗಳಲ್ಲಿ ಸದಾ ನನಗೆ