ಭಾರತ ಬಿಟ್ಟು ತೊಲಗಿ ಎಂದು ಅಭಿಮಾನಿ ಮೇಲೆ ಹರಿಹಾಯ್ದ ವಿರಾಟ್ ಕೊಹ್ಲಿ

ನವದೆಹಲಿ, ಗುರುವಾರ, 8 ನವೆಂಬರ್ 2018 (07:31 IST)

ನವದೆಹಲಿ: ಭಾರತದಲ್ಲಿದ್ದುಕೊಂಡು ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡದೇ ಬೇರೆ ದೇಶದ ಕ್ರಿಕೆಟಿಗರನ್ನು ಇಷ್ಟಪಡುವುದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಅಭಿಮಾನಿಯೊಬ್ಬರ ಮೇಲೆ ಹರಿಹಾಯ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿವಾದಕ್ಕೀಡಾಗಿದ್ದಾರೆ.
 
ಹೊಸದಾಗಿ ಲಾಂಚ್ ಆಗಿರುವ ಆಪ್ ನಲ್ಲಿ ಕೊಹ್ಲಿ ಇನ್ ಸ್ಟಾಗ್ರಾಂ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ‘ಓವರ್ ರೇಟೆಡ್ ಬ್ಯಾಟ್ಸ್ ಮನ್. ವೈಯಕ್ತಿಕವಾಗಿ ನನಗೆ ಅವರ ಬ್ಯಾಟಿಂಗ್ ನಲ್ಲಿ ವಿಶೇಷತೆ ಕಾಣುತ್ತಿಲ್ಲ. ನನಗೆ ಭಾರತೀಯರಿಗಿಂತ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಕ್ರಿಕೆಟಿಗರ ಬ್ಯಾಟಿಂಗ್ ನೋಡಲು ಇಷ್ಟ’ ಎಂದಿದ್ದರು.
 
ಇದಕ್ಕೆ ಕೊಹ್ಲಿ ‘ಸರಿ, ಹಾಗಿದ್ದರೆ ನೀವು ಭಾರತದಲ್ಲಿರಲು ಲಾಯಕ್ಕು ಎಂದು ನನಗನಿಸುತ್ತಿಲ್ಲ. ನೀವು ಬೇರೆ ದೇಶಕ್ಕೆ ಹೋಗಿ ಬದುಕಬೇಕು. ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದವರನ್ನು ಇಷ್ಟಪಡುತ್ತಿದ್ದರೆ ಇಲ್ಲಿ ಯಾಕಿರಬೇಕು? ನೀವು ನನ್ನನ್ನು ಇಷ್ಟಪಡದೇ ಇದ್ದರೂ ಪರವಾಗಿಲ್ಲ. ಆದರೆ ನಮ್ಮ ದೇಶದಲ್ಲಿ ನೀವು ಇರಬೇಕೆಂದು ನನಗಿಸುತ್ತಿಲ್ಲ. ನಿಮ್ಮ ಆಯ್ಕೆಯನ್ನು ಸರಿ ಮಾಡಿಕೊಳ್ಳಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
 
ಇದೇ ಕಾರಣಕ್ಕೆ ಕೊಹ್ಲಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಿದ್ದರೆ ಕ್ರಿಕೆಟ್ ಇಷ್ಟಪಡದೇ ಇದ್ದರೆ, ಕೊಹ್ಲಿಯನ್ನು ಇಷ್ಟಪಡದೇ ಇದ್ದರೆ ಭಾರತದಲ್ಲಿ ಇರುವ ಯೋಗ್ಯತೆ ಇಲ್ಲ ಎಂದೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಅಂತೂ ಸುಖಾ ಸುಮ್ಮನೇ ಕೊಹ್ಲಿ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಾಮೆಂಟರಿ ಬಾಕ್ಸ್ ನಲ್ಲಿ ಕೂದಲೆಳೆಯಲ್ಲಿ ಅಪಾಯದಿಂದ ತಪ್ಪಿಸಿಕೊಂಡ ಸುನಿಲ್ ಗವಾಸ್ಕರ್, ಸಂಜಯ್ ಮಂಜ್ರೇಕರ್

ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಲಕ್ನೋದ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ...

news

ಹೈದರಾಬಾದ್ ಬಿಟ್ಟು ಶಿಖರ್ ಧವನ್ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದರ ಕಾರಣವೇನು ಗೊತ್ತಾ?

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮುಂಬರುವ ಐಪಿಎಲ್ ಸೀಸನ್ ನಿಂದ ತಮ್ಮ ತವರು ಡೆಲ್ಲಿ ಡೇರ್ ...

news

ಟೀಂ ಇಂಡಿಯಾ ಪಂದ್ಯಾರಂಭಕ್ಕೂ ಮುನ್ನ ಮೈದಾನದಲ್ಲಿ ಈ ಬದಲಾವಣೆ ಮಾಡಿದ ಯುಪಿ ಸರ್ಕಾರ

ಲಕ್ನೋ: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಪಂದ್ಯಕ್ಕೂ ಮೊದಲು ಉತ್ತರ ಪ್ರದೇಶ ...

news

ಧೋನಿಯನ್ನು ತಂಡದಿಂದ ಕೈಬಿಟ್ಟ ಉದ್ದೇಶವೇ ಮರೆತ ಟೀಂ ಇಂಡಿಯಾ?!

ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಿಂದ ಧೋನಿಯನ್ನು ಕೈ ಬಿಡುವಾಗ ಯುವ ...