Widgets Magazine

ಐಪಿಎಲ್ ನಲ್ಲಿ ಈ ಬಾರಿ ವಿರಾಟ್ ಕೊಹ್ಲಿ ಎಲ್ಲಾ ಪಂದ್ಯ ಆಡೋದೇ ಡೌಟು?!

ಬೆಂಗಳೂರು| Krishnaveni K| Last Modified ಶುಕ್ರವಾರ, 1 ಮಾರ್ಚ್ 2019 (09:14 IST)
ಬೆಂಗಳೂರು: ಐಪಿಎಲ್ ಕ್ರಿಕೆಟ್ ಇನ್ನೇನು ಈ ತಿಂಗಳ ಅಂತ್ಯಕ್ಕೆ ಆರಂಭವಾಗುತ್ತಿದೆ. ಆದರೆ ಈ ಬಾರಿ ಸ್ಟಾರ್ ಆಟಗಾರರು ಐಪಿಎಲ್ ನಲ್ಲಿ ಎಲ್ಲಾ ಪಂದ್ಯಗಳಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

 
ಐಪಿಎಲ್ ಮುಗಿದ ಬಳಿಕ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಿದೆ. ಇಂಗ್ಲೆಂಡ್ ನಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಗೆ ಸಿದ್ಧರಾಗಬೇಕಿರುವುದರಿಂದ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಹೆಚ್ಚು ಐಪಿಎಲ್ ಪಂದ್ಯವಾಡಿ ಗಾಯದ ಸಮಸ್ಯೆಗೆ ಸಿಲುಕಿ ವಿಶ್ವಕಪ್ ಟಿಕೆಟ್ ಕಳೆದುಕೊಳ್ಳಲು ಯಾವ ಆಟಗಾರರೂ ಇಷ್ಟಪಡಲ್ಲ.
 
ಇದೇ ಕಾರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರೂ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಈ ಬಾರಿ ಐಪಿಎಲ್ ನಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ವಿಪರೀತ ಕ್ರಿಕೆಟ್ ಆಡಿ ಬಳಲಿದರೆ ಮತ್ತೆ ವಿಶ್ವಕಪ್ ನಲ್ಲಿ ಪೂರ್ಣ ಪ್ರಮಾಣದ ಕ್ಷಮತೆ ತೋರುವುದು ಕಷ್ಟ. ಅದೇ ಕಾರಣಕ್ಕೆ ಪ್ರಮುಖ ಪಂದ್ಯಗಳಿಗೆ ಹಾಜರಾಗಿ, ಅನಗತ್ಯ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರಂತೇ ಭಾರತದ ಪ್ರಮುಖ ವೇಗಿಗಳು, ಬ್ಯಾಟ್ಸ್ ಮನ್ ಗಳೂ ಔಪಚಾರಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :