ಮುಂಬೈ: ಟಿ20 ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿಯಿಂದ ಏಕದಿನ ನಾಯಕತ್ವಕ್ಕೂ ರಾಜೀನಾಮೆ ಕೊಡಿಸುವ ವಿಚಾರವಾಗಿ ಬಿಸಿಸಿಐನಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.ವಿರಾಟ್ ಕೊಹ್ಲಿ ಈಗ ಏಕದಿನ ಮತ್ತು ಟೆಸ್ಟ್ ನಾಯಕತ್ವ ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಟಿ20 ತಂಡಕ್ಕೆ ರೋಹಿತ್ ನಾಯಕರಾಗಿ ಆಯ್ಕೆಯಾಗಿದ್ದು, ಮುಂದೆ ಅವರನ್ನೇ ಏಕದಿನ ತಂಡಕ್ಕೂ ನಾಯಕರಾಗಿಸುವ ಇರಾದೆ ಬಿಸಿಸಿಐನದ್ದಾಗಿದೆ ಎನ್ನಲಾಗಿದೆ.ಈ ನಿಟ್ಟಿನಲ್ಲಿ ಬಿಸಿಸಿಐ ಈಗಾಗಲೇ ಮಾತುಕತೆಯನ್ನೂ ನಡೆಸಿದೆ ಎನ್ನಲಾಗಿದೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಮುನ್ನ