ಮುಂಬೈ: ಟೀಂ ಇಂಡಿಯಾ ನಾಯಕನ ಹುದ್ದೆ ಎನ್ನುವುದು ಎಷ್ಟು ಪವರ್ ಫುಲ್ ಎಂದರೆ ತಂಡದ ಕೋಚ್ ಆಯ್ಕೆ ಕೂಡಾ ಹೆಸರಿಗೆ ಮಾತ್ರ ಆಯ್ಕೆ ಸಮಿತಿ ಮಾಡಿದರೂ, ಅಂತಿಮವಾಗಿ ನಾಯಕನ ಅಭಿಪ್ರಾಯವೇ ಮುಖ್ಯವಾಗುತ್ತಿತ್ತು.ಆದರೆ ಈ ಬಾರಿ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡುವಾಗ ನಾಯಕ ವಿರಾಟ್ ಕೊಹ್ಲಿಯ ಅಭಿಪ್ರಾಯ ಕೇಳುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.ಕಳೆದ ಬಾರಿ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಮಾಡಲೂ ಕೊಹ್ಲಿ ಒತ್ತಾಯವೇ ಕಾರಣ ಎನ್ನಲಾಗಿದೆ.