ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುತ್ತಿರುವ ಪರಿ ನೋಡಿದರೆ ವಿಶ್ವದ ಯಾವುದೇ ಬೌಲರ್ ಗಳ ಎದೆ ನಡುಗುತ್ತದೆ. ಇದೀಗ ಬಾಂಗ್ಲಾ ಕ್ರಿಕೆಟಿಗರೊಬ್ಬರು ಕೊಹ್ಲಿಯನ್ನು ಮನುಷ್ಯನೇ ಅಲ್ಲ ಎಂದಿದ್ದಾರೆ.ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಮಾತು ಹೇಳಿದ್ದಾರೆ. ಅವರು ಬ್ಯಾಟ್ ಮಾಡುವ ಪರಿ ನೋಡಿದರೆ ಸಾಮಾನ್ಯ ಮನುಷ್ಯನೇ ಅಲ್ಲ ಎನಿಸುತ್ತದೆ ಎಂದು ತಮೀಮ್ ಕೊಹ್ಲಿಯನ್ನು ಹೊಗಳಿದ್ದಾರೆ.ನನಗೆ ಅವರು ಆಡುವುದನ್ನು ನೋಡಿದರೆ ಕೆಲವೊಮ್ಮೆ ಇವರು ಮನುಷ್ಯನೇ ಅಲ್ಲವೇನೋ ಎನಿಸುತ್ತದೆ.