Widgets Magazine

ಏನೇ ಮಾಡಿದ್ರೂ ತಂಡದ ಒಳ್ಳೆಯದಕ್ಕೇ ಮಾಡ್ತೀವಿ: ಆಟಗಾರರ ಆಯ್ಕೆ ಗೊಂದಲದ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆ

ಆಂಟಿಗುವಾ| Krishnaveni K| Last Modified ಮಂಗಳವಾರ, 27 ಆಗಸ್ಟ್ 2019 (09:17 IST)
ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ರನ್ನು ಹೊರಗಿಟ್ಟಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

 
ತಂಡದ ಹಿತದೃಷ್ಟಿಯಿಂದ ಯಾವುದು ಉತ್ತಮ, ಯಾವ ಆಟಗಾರ ಸೂಕ್ತ ಎನಿಸುತ್ತದೋ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
 
‘ನಮ್ಮ ಆಡುವ ಹನ್ನೊಂದರ ಬಳಗದ ಬಗ್ಗೆ ಯಾವತ್ತೂ ಚರ್ಚೆಗಳಾಗುತ್ತವೆ. ನಾವು ಯಾವುದೇ ಪಂದ್ಯಕ್ಕೆ ಮೊದಲು ಚರ್ಚೆ ನಡೆಸಿ ಅತ್ಯುತ್ತಮ 11 ಜನರನ್ನು ಆಯ್ಕೆ ಮಾಡುತ್ತೇವೆ. ಅದು ತಂಡದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ’ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :