ಟೀಂ ಇಂಡಿಯಾ ವೇಗಿಗಳ ಯಶಸ್ಸಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:40 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಭಾರತದಂತಹ ಉಪಖಂಡದ ಪಿಚ್ ಗಳಲ್ಲೂ ಟೀಂ ಇಂಡಿಯಾ ವೇಗಿಗಳು ಯಶಸ್ಸು ಕಾಣುತ್ತಿರುವುದರ ಹಿಂದಿನ ಗುಟ್ಟೇನೆಂದು ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

 
ಸ್ಪಿನ್ನರ್ ಗಳು ಮತ್ತು ವೇಗಿಗಳು ಪರಸ್ಪರ ಬೆಂಬಲವಾಗಿದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ.  ಅಗತ್ಯದ ಸಂದರ್ಭದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ ಎನ್ನುವುದೇ ಧನಾತ್ಮಕ ಅಂಶ.
 
ಅದರ ಹೊರತಾಗಿ ಭಾರತೀಯ ಪಿಚ್ ಗಳಲ್ಲಿ ತಾಪಮಾನ ಹೆಚ್ಚು. ಇಲ್ಲಿ ವೇಗಿಗಳಿಗೆ ಸುದೀರ್ಘ ಸ್ಪೆಲ್ ಎಸೆಯುವುದು ಕಷ್ಟ. ಹೀಗಾಗಿ ವೇಗಿಗಳು ಶಾರ್ಟ್ ಸ್ಪೆಲ್ ಎಸೆಯಲು ಕೇಳುತ್ತಾರೆ. ಆ ಅವಕಾಶ  ಅವರಿಗೆ ಒದಗಿಸಿದಾಗ ಸಹಜವಾಗಿಯೇ ಅವರು ಯಶಸ್ಸು ಪಡೆಯುತ್ತಿದ್ದಾರೆ. ಅವರು ಯಾವತ್ತೂ ತಮ್ಮ ಪ್ರಯತ್ನ ಬಿಡುವುದಿಲ್ಲ ಎಂದು ಕೊಹ್ಲಿ ಹೊಗಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :