ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಮೇಲೆ ಸಾಮಾನ್ಯವಾಗಿ ಕ್ರಿಕೆಟಿಗರು ಟಿ20 ಪಂದ್ಯಗಳಲ್ಲಿ, ಕ್ಲಬ್ ಟೂರ್ನಿಗಳಲ್ಲಿ ಆಡುತ್ತಿರುತ್ತಾರೆ. ಆದರೆ ನಿವೃತ್ತಿ ನಂತರ ವಿರಾಟ್ ಕೊಹ್ಲಿ ಏನು ಮಾಡುತ್ತಾರೆ ಗೊತ್ತಾ?ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಪ್ರಶ್ನೆ ಎದುರಾಯಿತು. ನಿವೃತ್ತಿ ನಂತರ ನೀವು ಆಸ್ಟ್ರೇಲಿಯನ್ ಬಿಗ್ ಬಾಶ್ ನಂತಹ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತೀರಾ ಎಂದು ಅವರಿಗೆ ಪ್ರಶ್ನೆ ಕೇಳಿದಾಗ ಖಂಡಿತಾ ಇಲ್ಲ. ನಿವೃತ್ತಿ ಘೋಷಿಸಿದ ಮೇಲೆ ಮತ್ತೆಂದಿಗೂ ನಾನು ಬ್ಯಾಟ್ ಎತ್ತಿಕೊಳ್ಳಲ್ಲ