ಮುಂಬೈ: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತ್ಯಜಿಸಿದ್ದರ ಹಿಂದಿನ ಕಾರಣವೇನೆಂದು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.ತನ್ನ ಕೆಲಸದೊತ್ತಡ ಕಡಿಮೆ ಮಾಡಲೆಂದು ರಾಜೀನಾಮೆ ನೀಡಿದೆ. ಇದರಲ್ಲಿ ಅಚ್ಚರಿ ಪಡುವಂತದ್ದು ಏನೂ ಇಲ್ಲ ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.‘ಯಾರೇ ಆದರೂ ನಮ್ಮ ಹಿಡಿತಕ್ಕಿಂತ ಹೆಚ್ಚು ಇಟ್ಟುಕೊಳ್ಳಬಾರದು ಎಂಬುದು ನನ್ನ ಭಾವನೆ. ಒಂದು ವೇಳೆ ನನ್ನಿಂದ ಅದು ಸಾಧ್ಯವೆನಿಸಿದರೂ ಅದನ್ನು ನಾನು ಎಂಜಾಯ್ ಮಾಡಲಾರೆ. ಹೊರಗಿನವರಿಗೆ ಇದು ಶಾಕಿಂಗ್ ನಿರ್ಧಾರ ಎನಿಸಬಹುದು.