ಪುಣೆ|
Krishnaveni K|
Last Modified ಗುರುವಾರ, 10 ಅಕ್ಟೋಬರ್ 2019 (09:19 IST)
ಪುಣೆ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಯಶಸ್ಸು ಗಳಿಸಿದ ಮೇಲೆ ರೋಹಿತ್ ಶರ್ಮಾ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.
ಇದೀಗ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಹೊಗಳಿಕೆಯ ಸುರಿಮಳೆಗೈದಿದ್ದು ರೋಹಿತ್ ಟಾಪ್ ಆರ್ಡರ್ ನಲ್ಲಿದ್ದರೆ ನಮಗೆ ಗೆಲುವಿನ ಚಿಂತೆಯಿರಲ್ಲ ಎಂದಿದ್ದಾರೆ.
‘ರೋಹಿತ್ ರಂತಹ ಆಟಗಾರರು ಮೇಲಿನ ಕ್ರಮಾಂಕದಲ್ಲಿದ್ದರೆ ನಮಗೆ ಗೆಲುವಿನ ಬಗ್ಗೆ ಚಿಂತೆ ಬೇಕಾಗಿಲ್ಲ. ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ನಾವು ಗೆಲುವಿನ ಪರಿಸ್ಥಿತಿಯಲ್ಲಿರುತ್ತೇವೆ. ರೋಹಿತ್ ಬಗ್ಗೆ ನಮಗೆಲ್ಲಾ ಖುಷಿಯಿದೆ. ಅವರು ಟೆಸ್ಟ್ ಕ್ರಿಕೆಟ್ ನ್ನು ಎಂಜಾಯ್ ಮಾಡುತ್ತಿದ್ದಾರೆ’ ಎಂದು ಕೊಹ್ಲಿ ಹೊಗಳಿದ್ದಾರೆ.