Widgets Magazine

ಧೋನಿಯ ಮತ್ತೊಂದು ದಾಖಲೆ ಮುರಿಯುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಜಮೈಕಾ| Krishnaveni K| Last Modified ಗುರುವಾರ, 29 ಆಗಸ್ಟ್ 2019 (10:28 IST)
ಜಮೈಕಾ: ಮೊನ್ನೆಯಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಗೆದ್ದು ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆಯನ್ನು ಸರಿಗಟ್ಟಿದ್ದ ವಿರಾಟ್ ಕೊಹ್ಲಿ ಈಗ ಅದನ್ನು ಮುರಿಯಲು ಸಜ್ಜಾಗಿದ್ದಾರೆ.

 
ನಾಳೆಯಿಂದ ವಿಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನೂ ಗೆದ್ದರೆ ಭಾರತದ ಪರ ಗರಿಷ್ಠ ಟೆಸ್ಟ್ ಗೆದ್ದ ದಾಖಲೆ ಮಾಡಲಿದ್ದಾರೆ.
 
ಇಬ್ಬರೂ ಸದ್ಯಕ್ಕೆ 27 ಟೆಸ್ಟ್ ಪಂದ್ಯ ಗೆದ್ದು ಇಬ್ಬರೂ ಸಮ ಸ್ಥಾನದಲ್ಲಿದ್ದಾರೆ. ಈ ಪಂದ್ಯ ಗೆದ್ದರೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಯಶಸ್ವೀ ನಾಯಕನೆನಿಸಿಕೊಳ್ಳಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :